ಸಣ್ಣಪುಟ್ಟ ವ್ಯಾಪಾರಕ್ಕೆ ಟ್ರೇಡ್ ಲೈಸೆನ್ಸ್ಗೆ ಆಗ್ರಹಿಸಿ ಸಾಣಾಪೂರ ಗ್ರಾ.ಪಂ.ಎದುರು ಗ್ರಾಮಸ್ಥರ ಪ್ರತಿಭಟನೆ
https://youtu.be/iVl7XmdYS5U?si=oQW6r1y1DWEjUNvf
https://youtu.be/iVl7XmdYS5U?si=oQW6r1y1DWEjUNvf
*ಚಹಾದಂಗಡಿ, ಸೇರಿ ವ್ಯಾಪಾರ ಮತ್ತು ವಿದ್ಯುತ್ ಸಂಪರ್ಕಕ್ಕೆ ಪ್ರಾಧಿಕಾರದ ಎನ್‌ಓಸಿ ಬೇಡ
*ಸಾಣಾಪೂರ ಭಾಗದಲ್ಲಿಲ್ಲ ಪುರಾತತ್ವ ಇಲಾಖೆಯ ಸ್ಮಾರಕಗಳು ಸ್ಥಳೀಯರ ಪ್ರತಿಪಾದನೆ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಸಾಣಾಪೂರದಲ್ಲಿ ಸಣ್ಣಪುಟ್ಟ ವ್ಯಾಪಾರ ವಹಿವಾಟು ಮಾಡಲು ಗ್ರಾ.ಪಂ.ಟ್ರೇಡ್ ಲೈಸೆನ್ ಕೊಡದಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ನಿಯಮವನ್ನು ರೂಪಿಸಿದ್ದು ಇದರಿಂದ ಕೂಡಲೇ ಟ್ರೇಡ್ ಲೈಸೆನ್ಸ್ ಕೊಡಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಸಾಣಾಪೂರ ಗ್ರಾಮಸ್ಥರು, ಮಹಿಳೆಯರು ಗ್ರಾ.ಪಂ.ಕಚೇರಿ ಎದುರು ಪ್ರತಿಭಟನೆ ನಡೆಸಿ ಪಿಡಿಓ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸಾಣಾಪೂರ ಗ್ರಾಮದ ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಗಳಲ್ಲಿ ಚಹಾದಂಗಡಿ, ತಂಪುಪಾನೀಯ, ಕಿರಾಣಿ, ಎಳೇನೀರು,ಕಾರಕುಟ್ಟುವ ಮಿಷನ್ ಸೇರಿ ಸಣ್ಣಪುಟ್ಟ ವ್ಯಾಪಾರ ಮಾಡಲು ಗ್ರಾ.ಪಂ.ಹಾಗೂ ಜೆಸ್ಕಾಂ ಅಧಿಕಾರಿಗಳು ನೋಟೀಸ್ ಕೊಟ್ಟು ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಲಕ್ಷಾಂತ ರೂ.ಗಳ ದಂಡ ವಿಧಿಸಿ ನೋಟೀಸ್ ನೀಡುತ್ತಿದ್ದು ಮಾನಸೀಕ ಹಿಂಸೆಯಾಗಿದೆ. ಮನೆಯ ಮುಂದೆ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರಾಧಿಕಾರದ ಎನ್‌ಓಸಿ ಕಡ್ಡಾಯ ಎಂದು ಗ್ರಾ.ಪಂ. ಪಿಡಿಓ ಅವರು ನಿರ್ಮಾಣ ಕಾರ್ಯ ನಿಲ್ಲಿಸುತ್ತಿದ್ದಾರೆ. ಇದರಿಂದ ಬಹಳ ತೊಂದರೆಯಾಗಿದ್ದು ಕೂಡಲೇ ಗ್ರಾಮದ ಪ್ರತಿ ಕಾರ್ಯಕ್ಕೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಎನ್‌ಓಸಿ ಬೇಕೆನ್ನುವ ಗ್ರಾ.ಪಂ ಜೆಸ್ಕಾಂ, ಅರಣ್ಯ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ಸಾಣಾಪೂರ ಭಾಗದ ಜನರನ್ನು ಅವಮಾನಿಸುತ್ತಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಟ್ರೇಡ್ ಲೈಸೆನ್ಸ್ ಇಲ್ಲದೇ ಇನ್ಸೂರೆನ್ಸ್ ಕ್ಲೆöÊಮ್ ಕೂಡ ಆಗುತ್ತಿಲ್ಲ. ಇಲ್ಲಿಯ ಭೂಮಿ, ಮನೆ ಖರೀದಿಗೂ ಕ್ವಾರಿ ಬಿದ್ದಿದ್ದು ಸಾಣಾಪೂರ ಭಾಗದ ಅಭಿವೃದ್ಧಿ ಕುಂಠಿತವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ಸಾಣಾಪೂರ ಜನಸಾಮಾನ್ಯರು ಸ್ವಾವಲಂಭಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಸದಸ್ಯರಾದ ಕೋಡಿ ನಾಗೇಶ, ಶೇರಖಾನ್ ಸೇರಿ ಗ್ರಾಮದ ಮಹಿಳೆಯರು, ರೈತರು ಕೂಲಿಕಾರರು ಪಾಲ್ಗೊಂಡಿದ್ದರು.
**
ಸಾಣಾಪೂರ ಗ್ರಾಮವನ್ನು ಅವ್ಶೆಜ್ಞಾನಿಕವಾಗಿ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆ ಮಾಡಿದ್ದು ಇದರಿಂದ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ಮಾಡಲು ಗ್ರಾ.ಪಂ.ಯಿಂದ ಟ್ರೇಡ್ ಲೈಸೆನ್ಸ್ ಪಡೆಯಲು ಪ್ರಾಧಿಕಾರದ ಎನ್‌ಓಸಿ ಪಡೆಯುವುದು ಕಡ್ಡಾಯವಾಗಿದೆ. ಗ್ರಾಮದಲ್ಲಿ ಶೇ.70ಕ್ಕಿಂತಲೂ ಹೆಚ್ಚು ಕ್ರಮಬದ್ದವಲ್ಲದ ಆಸ್ತಿ(11ಬಿ) ಇದ್ದು ಇದಕ್ಕೆ ಪ್ರಾಧಿಕಾರ ಎನ್‌ಓಸಿ ಕೊಡುವುಲ್ಲ. ಇದರಿಂದ ಗ್ರಾಮದ ಸಣ್ಣ ಪುಟ್ಟ ವ್ಯಾಪಾರಸ್ಥರು ಇನ್ಸೂರೆನ್ಸ್ ಕ್ಲೈಮ್ ಮಾಡಿಕೊಳ್ಳಲು ಆಗುತ್ತಿಲ್ಲ. ಚಹಾದಂಗಡಿ, ಪಂಚರ ಅಂಗಡಿ ಸೇರಿ ಇತರೆ ವ್ಯಾಪಾರ ಮಾಡಲು ಜೆಸ್ಕಾಂ ನವರು ಪ್ರಾಧಿಕಾರದ ಎನ್‌ಓಸಿ ಕೇಳುತ್ತಿದ್ದು ಕಳ್ಳತನದಲ್ಲಿ ಅಂಗಡಿ ಮುಂಗಟ್ಟುಗಳನ್ನು ನಡೆಸಿಕೊಳ್ಳಬೇಕಿದೆ. ಇದರಿಂದ ಜೆಸ್ಕಾಂನವರು ದಾಳಿ ಮಾಡಿ ಲಕ್ಷಾಂತರ ರೂ.ಗಳ ದಂಡ ಹಾಕುತ್ತಿದ್ದಾರೆ.ಜಿಲ್ಲಾಡಳಿತ ಕೂಡಲೇ ಸಮಸ್ಯೆ ಪರಿಹಾರ ಮಾಡಬೇಕು
-ಕೋಡಿ ನಾಗೇಶ ಗ್ರಾ.ಪಂ. ಮಾಜಿ ಸದಸ್ಯ.

