ಮಾಲವಿ ಡ್ಯಾಂ ಕ್ರಸ್ಟ್ ಗೇಟ್ ಗಳ ಅಳವಡಿಕೆಗೆ 4 ಕೋಟಿ ರೂ.ಮಂಜೂರಿಯಾದರೂ ಗುತ್ತಿಗೆದಾರ ನಾಪತ್ತೆ! ಕಾಮಗಾರಿ ವಿಳಂಭ ರೈತಸಂಘದ ಮುಖಂಡರಿಂದ ಪ್ರತಿಭಟನೆಯ ಎಚ್ಚರಿಕೆ.

*ಶಾಸಕರು,ಉಸ್ತುವಾರಿ ಸಚಿವರು ಹಾಗೂ ಸಂಸದರ ವಿರುದ್ದ ಆಕ್ರೋಶ.
*ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘದ ನೇತೃತ್ವದಲ್ಲಿ ಏ 27ರಂದು ಉಗ್ರ ಪ್ರತಿಭಟನೆ.
ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ: ಮಳೆ ಆಶ್ರಿತ ಬಯಲು ಪ್ರದೇಶವಾಗಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಡ್ಯಾಂ ಕ್ರಸ್ಟ್ ಗೇಟ್ ಗಳ ಅಳವಡಿಕೆ,ದುರಸ್ತಿ ಕಾಮಗಾರಿಗೆ 4ಕೋಟಿ ರೂ.ಮಂಜೂರು ಆಗಿದ್ದರೂ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಕ್ರಸ್ಟ್ ಗೇಟ್ ಅಳವಡಿಸುವ ಕಾಮಗಾರಿ ಅರ್ಧಂಬರ್ಧ ಮಾಡಿ ನಾಪತ್ತೆಯಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಎರಡು ಕ್ರಸ್ಟ್ ಗೇಟ್ ಗಳ ಜೋಡಣೆ ಇಲ್ಲದೆ ಇರುವುದರಿಂದ ಮಳೆಗಾಲದಲ್ಲಿ ನೀರು ಹೋಲಾಗುವ ಆತಂಕವಿದೆ ಇದಕ್ಕೆ ತಾಲೂಕಿನ ಶಾಸಕರು, ಉಸ್ತುವಾರಿ ಸಚಿವರು, ಸಂಸದರು ಹಾಗೂ
ರಾಜ್ಯ ಸರ್ಕಾರ ನೇರ ಹೊಣೆಯಾಗಿದೆ. ಕೂಡಲೇ ಕ್ರಸ್ಟ್ ಗೇಟ್ ಗಳ ಜೋಡಣೆ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಿ ಮಳೆಗಾಲದ ವೇಳೆಗೆ ಡ್ಯಾಂ ನಲ್ಲಿ ಮಳೆ ನೀರು ನಿಲ್ಲುವಂತೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅವರು ಬುಧವಾರ ಮಾಲವಿ ಡ್ಯಾಂ ಸ್ಥಳಕ್ಕೆ ರೈತ ಸಂಘಟನೆಯ ನಿಯೋಗದೊಂದಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಗರಿಬೊಮ್ಮನಹಳ್ಳಿ ತಾಲುಕಿನ ಜೀವನಾಡಿ ಹಾಗೂ ಪಂಪ್ ಸೆಟ್ ಗಳ ಅಂತರ ಜಲ ಹೆಚ್ಚಳಕ್ಕೆ ಕಾರಣವಾಗಿರುವ ಮಾಲವಿ ಜಲಾಶಯದ ೧೦ ಗೇಟ್‌ಗಳ ಪೈಕಿ ೮ ಕ್ರಸ್ಟ್‌ಗೇಟ್ ದುರಸ್ಥಿ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಎರಡ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಕಳೆದ ೨ ತಿಂಗಳಿಂದ ಸ್ಥಗಿತಗೊಂಡಿದೆ ,ಇದೇ ಏಪ್ರಿಲ್ ೨೬ರ ಒಳಗಾಗಿ ಕಾರ್ಯ ಪ್ರಾರಂಭವಾಗದಿದ್ದರೆ ಎ.೨೭ಕ್ಕೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶಾಸಕ ನೇಮಿರಾಜ್,ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್,ಸಂಸದ ಈ.ತುಕಾರಾಂ
ಹಾಗೂಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ವಿರುಧ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನೀರು ಸಂಗ್ರಹ ಮಾಡುವ ಡ್ಯಾಂ ಮತ್ತು ಬೃಹತ್ ಕೆರೆಗಳು ಇರಲಿಲ್ಲ,
ದಿವಂಗತ ಶಾಸಕರಾದ ಬಾಚಿಗೊಂಡನಹಳ್ಳಿಯ
ಚನ್ನಬಸವನಗೌಡ್ರು ಮಾಲವಿ ಡ್ಯಾಂ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಪ್ರಸ್ತುತದಲ್ಲಿ ಡ್ಯಾಂ ರಾಜ್ಯ ಸರಕಾತ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ, ಕುಡಿಯುವ ನೀರಿಗಾಗಿ ಬಳಸುವಂತೆ ತುಂಗಭದ್ರಾ ಡ್ಯಾಂ ಹಿನ್ನೀರಿನಿಂದ ಮಾಲವಿ ಜಲಾಶಯಕ್ಕೆ 800 ಕೋಟಿ ರೂ.ಗಳನ್ನು ಖರ್ಚು ಮಾಡಿ ಮಾಲವಿ ಡ್ಯಾಂ ಭರ್ತಿ ಮಾಡುವ ಕೆಲಸವಾಗಿದ್ದು ಪ್ರಸ್ತುತ
ಕ್ರಸ್ಟ್ ಗೇಟ್ ದುರಸ್ಥಿ ಕಾಮಗಾರಿಯ ೨ ಗೇಟ್ ಅಳವಡಿಕೆ ವಿಳಂಬವಾಗಿದೆ. ಇದಕ್ಕೆ ಇಲ್ಲಿನ ಜನಪ್ರತಿನಿಧಿ ಹಾಗೂ ಸಂಭಂಧಿಸಿದ ಇಲಾಖೆಯ ಅಧಿಕಾರಿಗಳು ಕಾರಣರಾಗಿದ್ದಾರೆ.
ಮಾಲವಿ ಡ್ಯಾಂ ಕೇವಲ 7.5 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗಷ್ಡೆ ಸಂಬಂಧಿಸಿದ್ದಲ್ಲ,
ಇಡೀ ಹಗರಿಬೊಮ್ಮನಹಳ್ಳಿ ಸಾರ್ವಜನಿಕರಿಗೆ ಜೀವನಕ್ಕೆ ಸಂಬಂಧಿಸಿದ ವಿಷಯವಾಗಿದೆ.
ಇನ್ನೂ ಕೆಲವೇ ದಿನಗಳಲ್ಲಿ ಮುಂಗಾರು ಮಳೆಗಾಲ ಪ್ರಾರಂಬವಾಗುತ್ತದೆ, ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾದರೆ ಡ್ಯಾಂನಲ್ಲಿ ಸಂಗ್ರಹವಾಗುತ್ತದೆ.
ಕೂಡಲೇ ಎರಡು ಕ್ರಸ್ಟ್ ಟ್ರಸ್ಟ್ ಗೇಟ್ಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಕಳೆದ ವರ್ಷ ನೀರು ಪೋಲದಂತೆ ಈ ಮಳೆಗಾಲದಲ್ಲೂ ಡ್ಯಾಂ ನೀರು ಪೋಲಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಸಾಹಿತಿ ಬಾಚಿಗೊಂಡನಹಳ್ಳಿ
ಹುರಕಡ್ಲಿ ಶಿವಕುಮಾರ್, ರಾಜ್ಯ ರೈತ ಸಂಘದ ತಂಬ್ರಹಳ್ಳಿ ರವಿಕುಮಾರ ಸೇರಿದಂತೆ ರೈತ ಮುಖಂಡರಿದ್ದರು.

