ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ: ಹೆಚ್.ಆರ್.ಶ್ರೀನಾಥಮಾನವಹಕ್ಕುಗಳ ಉಲ್ಲಂಘಟನೆಯಾಗುತ್ತಿದೆ: ಹೆಚ್.ಆರ್.ಶ್ರೀನಾಥ

*ರಾಜ್ಯ ಸರಕಾರ ಆನೆಗೊಂದಿ ಭಾಗವನ್ನು ಹಂಪಿ ಪ್ರಾಧಿಕಾರದಿಂದ ಕೂಡಲೇ ಕೈ ಬಿಡಬೇಕು.
*ಪ್ರಾಧಿಕಾರದಿಂದ ಬಡವರ ಊಟಕ್ಕೂ ಸಂಚಕಾರ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಆನೆಗೊಂದಿ ಭಾಗದಲ್ಲಿರುವ ಸ್ಮಾರಕಗಳ ಸಂರಕ್ಷಣೆಯ ನೆಪದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಸೇರ್ಪಡೆ ಮಾಡಿದ್ದು ಪ್ರಾಧಿಕಾರದ ನಿಯಮಗಳ ಪಾಲನೆ ನೆಪದಲ್ಲಿ ಅಧಿಕಾರಿಗಳು ಮಾನವ ಹಕ್ಕುಗಳ ಉಲ್ಲಂಘಟನೆಯ ಕಾರ್ಯ ನಿರಂತರವಾಗಿದ್ದು ಬಡವರ ಊಟಕ್ಕೂ ಸಂಚಕಾರ ಉಂಟಾಗಿದೆ. ರಾಜ್ಯ ಸರಕಾರ ಕೂಡಲೇ ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಕೈ ಬಿಡುವಂಡೆ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ ಒತ್ತಾಯಿಸಿದರು.
ಅವರು ತಾಲೂಕಿನ ಸಾಣಾಪೂರ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ದೀನ ದಲಿತರು, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದವರ ಜೀವನವನ್ನು ಮುಖ್ಯವಾಹಿನಿಗೆ ತರಲು ಅಂಬೇಡ್ಕರ್ ಇಡೀ ಜೀವನವನ್ನು ತ್ಯಾಗ ಮಾಡಿದ್ದಾರೆ. ಅವರ ಮಾರ್ಗದಲ್ಲಿ ಸರ್ವರೂ ನಡೆಯುವ ಮೂಲಕ ದೇಶವನ್ನು ಸಮ ಸಮಾಜದ ಕಡೆ ತೆಗೆದುಕೊಂಡು ಹೋಗಬೇಕಿದೆ. ಆದರೆ ನೌಕರ ಶಾಹಿ ವರ್ಗದವರು ಆನೆಗೊಂದಿ ಭಾಗದಲ್ಲಿ ಎಸ್ಸಿ ಎಸ್ಟಿ ಹಿಂದುಳಿದವರು ಗುಡ್ಡಗಾಡು ಪ್ರದೇಶದಲ್ಲಿ ಶತಮಾನಗಳಿಂದ ಜೀವನ ಕಟ್ಟಿಕೊಂಡು ಜೀವನ ಮಾಡುತ್ತಿದ್ದು ಕಳೆದ 35 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಹಂಪಿ ಅಭಿವೃದ್ದಿ ಪ್ರಾಧಿಕಾರದ ನೆಪದಲ್ಲಿ ಹೊಸಪೇಟೆಯಲ್ಲಿರುವ ಹೊಟೇಲ್ ಲಾಭಿಯವರ ಮಾತು ಕೇಳಿ ಆನೆಗೊಂದಿ ಭಾಗದ 15 ಗ್ರಾಮಗಳ ಜನರ ಜೀವನ ಜತೆ ಆಟವಾಡುತ್ತಿದ್ದಾರೆ. ಇಡೀ ಪ್ರದೇಶವನ್ನು ಕೋರ್ ಝೋನ್, ಗ್ರೀನ್ ಝೋನ್ ಎಂದು ವಿಂಗಡಿಸಿ ನಿಯಮಗಳ ನೆಪದಲ್ಲಿ ಬಿದ್ದ ಮನೆಗಳನ್ನು ಪುನರ್ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಕೂಡಲೇ ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಕೈ ಬಿಟ್ಟು ಕಿಷ್ಕಿಂಧಾ ಪ್ರಾಧಿಕಾರ ರಚನೆ ಮಾಡಿ ಸ್ಥಳೀಯರ ಬದುಕನ್ನು ಹಸನು ಮಾಡಬೇಕು. ಅಂಬೇಡ್ಕರ ಅವರ ಆಶಯವೂ ಅದೇ ಆಗಿದ್ದು ಸ್ಥಳೀಯರು ಉಗ್ರ ಹೋರಾಟ ಮಾಡುವ ಮೊದಲು ರಾಜ್ಯ ಸರಕಾರ 1988 ಪುರತತ್ವ ಕಾಯ್ದೆ ತಿದ್ದುಪಡಿ ಮಾಡಿ ಆನೆಗೊಂದಿ, ವಿರೂಪಾಪೂರಗಡ್ಡಿ ಗ್ರಾಮಗಳನ್ನು ಕೋರ್ ಝೋನ್ ದಿಂದ ತೆಗೆದು ಹಾಕಬೇಕು. ಸ್ಥಳೀಯ ಸ್ಮಾರಕಗಳನ್ನು ನೂರಾರು ವರ್ಷಗಳಿಂದ ಸ್ಥಳೀಯರೇ ಸಂರಕ್ಷಣೆ ಮಾಡಿ ಇಂದು ಅವುಗಳನ್ನು ನೋಡಲು ಉಳಿಸಿದ್ದಾರೆ. ಮುಂದೆಯೂ ಸ್ಥಳೀಯರು ಸಂರಕ್ಷಣೆ ಮಾಡುತ್ತಾರೆ. ಶಾಸಕರು, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಿ ಪ್ರಾಧಿಕಾರದ ಕಿರುಕುಳದಿಂದ ತಪ್ಪಿಸಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮರಿಯಮ್ಮನಹಳ್ಳಿ ಡಾ.ಚಂದ್ರಶೇಖರ ಅವರು ಡಾ.ಬಿ.ಆರ್.ಅಂಬೇಡ್ಕರ ಅವರ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃರ ಹಿರಿಯ ಪತ್ರಕರ್ತ ಕೆ.ಮಲ್ಲಿಕಾರ್ಜುನ, ಕೊಪ್ಪಳದ ಮುಖಂಡರಾದ ಸೈಯದ್, ಪಬ್ಲಿಕ್ ಪವರ್ ಸಂAಘಟನೆಯ ನ್ಯಾಯವಾದಿ ಬಿ.ಆರ್.ಪಾಟೀಲ್,
ಗ್ರಾ.ಪಂ.ಮಾಜಿ ಅಧ್ಯಕ್ಷ ಅಶೋಕ, ಮಾಜಿ ಉಪಾಧ್ಯಕ್ಷ ನರಸಿಂಹಲು, ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ರಾಜ್ಯ ಮುಖಂಡ ಕೋಡಿ ನಾಗೇಶ, ನಾಗಮುನಿರೆಡ್ಡಿ, ರಘುರಾಮ ರೆಡ್ಡಿ ಸೇರಿ ಗ್ರಾಮಸ್ಥರಿದ್ದರು.

