ರಾಮಲಿಂಗೇಶ್ವರ ಬೆಟ್ಡದಿಂದ ಜನವಸತಿ ಪ್ರದೇಶಕ್ಕೆ ಆಗಮಿಸಿದ್ದ ಆರು ಪೀಟು ಉದ್ದದ ಹೆಬ್ಬಾವು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟ ಉರಗ ಪ್ರೇಮಿ ಚನ್ನಬಸವ ಸ್ವಾಮಿ!

*ಕಾಡಿನಲ್ಲೂ ಹಾವು ಸೇರಿ ಅನುಪದ್ರವಿ ಪ್ರಾಣುಗಳಿಗೆ ಮನುಷ್ಯರ ಕಿರುಕುಳ.
*ಹಾವು ಎಂದರೆ ಈತನಿಗೆ ಪಂಚಪ್ರಾಣ.
ಕಿಷ್ಕಿಂಧವಾಣಿ ಸುದ್ದಿ.
ಗಂಗಾವತಿ: ನಗರದ ವಿರುಪಾಪುರ ತಾಂಡ ಪೊಲೀಸ್ ಕ್ವಾಟ್ರಸ್ ಹೊರ ವಲಯದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬೆಟ್ಟದಿಂದ ಜನವಸತಿ ಪ್ರದೇಶಕ್ಕೆ ಆಗಮಿಸುತ್ತಿದ್ದ ಹೆಬ್ಬಾವನ್ನು ಹಿಡಿದು ಅದನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಉರಗ ಮತ್ತು ಪ್ರಾಣಿ
ಪ್ರೇಮವನ್ನು
ನಗರದ ಸರೋಜ ನಗರದ ನಿವಾಸಿ ಚನ್ನಬಸವ ಸ್ವಾಮಿ ಮೆರೆದಿದ್ದಾರೆ.
ಚನ್ನಬಸವಸ್ವಾಮಿ ಅವರು ಮೂಲತಹ ದೈಹಿಕ ಶಿಕ್ಷಕರಾಗಿದ್ದು ತಮ್ಮ ವಿಭಿನ್ನ ಆಸಕ್ತಿ ಮತ್ತು ಧೈರ್ಯದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಹಾವುಗಳನ್ನು ನೋಡಿ ಭಯಪಡುವ ಸಾಮಾನ್ಯ ಜನರ ನಡುವೆ, ಇವರು ಹಾವುಗಳನ್ನೇ ತಮ್ಮ ಪಂಚಪ್ರಾಣವಾಗಿ ನೋಡಿಕೊಳ್ಳುತ್ತಿರುವುದು ವಿಶೇಷವಾಗಿದೆ.
ಚನ್ನಬಸವಸ್ವಾಮಿ ಅವರು ಕೇವಲ ಹಾವುಗಳನ್ನಷ್ಟೇ ಪ್ರೀತಿಸುವುದಲ್ಲ, ಒಬ್ಬ ಪರಿಸರ ಪ್ರೇಮಿ ಮತ್ತು ಪ್ರಾಣಿಗಳ ಪ್ರೇಮಿ ಆಗಿಯೂ ಗುರುತಿಸಿಕೊಂಡಿದ್ದಾರೆ. ಪ್ರಕೃತಿ ಹಾಗೂ ಜೀವಿಗಳ ಸಂರಕ್ಷಣೆಯ ಬಗ್ಗೆ ಅವರಿಗೆ ಅಪಾರ ಕಾಳಜಿ ಇದೆ.
ಹಾವು ಸೇರಿ ಪ್ರಾಣಿ,ಪಕ್ಷಿಗಳನ್ನು
ಸ್ನೇಹದಿಂದ ನೋಡಿಕೊಳ್ಳುತ್ತಿರುವುದು ಅವರ ಪ್ರೀತಿ ಮತ್ತು ಧೈರ್ಯಕ್ಕೆ ಉದಾಹರಣೆ. ಹಾವುಗಳ ಬಗ್ಗೆ ಇರುವ ಅನಾವಶ್ಯಕ ಭಯವನ್ನು ದೂರ ಮಾಡುವ ಕಾರ್ಯವನ್ನು ನಿರಂತರ ಮಾಡುತ್ತಿದ್ದಾರೆ.
***
“ಪ್ರಕೃತಿಯ ಪ್ರತಿಯೊಂದು ಜೀವಿಗೂ ತನ್ನದೇ ಆದ ಮಹತ್ವ ಇದೆ. ಹಾವುಗಳನ್ನೂ ನಾವು ರಕ್ಷಿಸಬೇಕು. ಅವು ನಮ್ಮ ಪರಿಸರದ ಭಾಗ, ಪರಿಸರ ಸಂರಕ್ಷಣೆ ಮತ್ತು ಪ್ರಾಣಿಗಳ ಮೇಲೆ ಎಲ್ಲರೂ ಪ್ರೀತಿ ತೋರಬೇಕು.ಇತ್ತೀಚೆಗೆ ಕೆಲ ವಿಕೃತಮನಸ್ಸಿನ ಯುವಕರು ಗಂಗಾವತಿ ಸುತ್ತಲಿನ ಬೆಟ್ಟಗಳಿಗೆ ಊಟ,ಮದ್ಯ ಸೇವನೆ ಮಾಡಲು ಹೋಗಿ ಉಳಿದ ಪದಾರ್ಥ,ಗಾಜಿನ ಚೂರು,ಪ್ಲಾಸ್ಟಿಕ್ ಎಸೆಯುವುದು,ಹಾವು,ಚೇಳು,ಉಡಾ,ಓತಿಕ್ಯಾತ,ಮೊಲ,ಪಾರಿವಾಳ ಮತ್ತು ಕೌಜುಗಾ
ಸೇರಿ ಸಣ್ಣ ಸಣ್ಣ ಪ್ರಾಣಿ,ಪಕ್ಷಿಗಳನ್ನು ಕೊಲ್ಲುತ್ತಿದ್ದಾರೆ.ಇದು ನಿಲ್ಲಬೇಕು.
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎಲ್ಲೇ ಹಾವು ಕಂಡು ಬಂದಲ್ಲಿ ಸಂಪರ್ಕಿಸಿದರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಗುತ್ತದೆ. ಹಾವು ಸೇರಿ ಯಾವುದೇ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮಾಡಿದರೆ ಪರಿಸರ ಸಮತೋಲ ಸಾಧ್ಯ.
-ಚನ್ನಬಸವಸ್ವಾಮಿ ಉರಗ ಪ್ರೇಮಿ ಗಂಗಾವತಿ.

