ವಿದ್ಯುತ್ ಅಸಮರ್ಪಕ ಪೂರೈಕೆ ಲಕ್ಷ್ಮಿ ಕ್ಯಾಂಪ್,ಗುಂಡಮ್ಮಕ್ಯಾಂಪ್ ಸುತ್ತಲಿನ ನಿವಾಸಿಗಳಿಂದ ರಸ್ತೆ ತಡೆದು ದಿಢೀರ್ ಪ್ರತಿಭಟನೆ!

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ನಗರದ ಅಂಬೇಡ್ಕರ್ ಸರ್ಕಲ್ ಬಳಿ ಲಕ್ಷ್ಮಿ ಕ್ಯಾಂಪ್ ಗುಂಡಮ್ಮ ಕ್ಯಾಂಪ್ ಮುರಾರಿ ಕ್ಯಾಂಪ್ ಹಾಗೂ ಸುತ್ತಲಿನ ನಿವಾಸಿಗಳು ಶನಿವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.
ಕಳೆದ ಒಂದು ವಾರದಿಂದ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಇದರಿಂದ ಕುಡಿಯುವ ನೀರು ಸೇರಿದಂತೆ ಬೇಸಿಗೆಯ ಬಿಸಿಲಿಗೆ ಮನೆಯಲ್ಲಿ ಚಿಕ್ಕ ಮಕ್ಕಳು ವೃದ್ಧರು ಪರಿತಪಿಸುವಂತಾಗಿದೆ.
ಈ ಬಗ್ಗೆ ಜೆಸ್ಕಾಂ ನವರಿಗೆ ಪದೇ ಪದೇ ಮನವಿ ಮಾಡಿದರೂ ನಿರೀಕ್ಷೆ ಮಾಡಲಾಗಿದೆ. ಕುಡಿಯುವ ನೀರು ಹಿಡಿಯಲು ವಿದ್ಯುತ್ ಅವಶ್ಯವಿದ್ದು ವಿದ್ಯುತ್ ಪೂರೈಕೆಯಲ್ಲಿ ಜೆಸ್ಕಾಂನವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಜುಲೈ ನಗರ ಮತ್ತು ಕೇಂದ್ರ ಬಸ್ ನಿಲ್ದಾಣದ ಮಧ್ಯೆ ಗೌಳಿಮಹಾದೇವಪ್ಪ ರಸ್ತೆ ತಡೆದಿದ್ದರಿಂದ
ಬಸ್ ಸಂಚಾರ ಸ್ಥಗಿತವಾಗಿ ಪ್ರಯಾಣಿಕರು ಪರಿತಪಿಸುವಂತಾಯಿತು.

