ಅಕ್ರಮ ಹೆಂಡ (ಶೇಂದಿ)ಮಾರಾಟದ ಅಡ್ಡೆಯ ಮೇಲೆ ಗ್ರಾಮೀಣ ಪೊಲೀಸರ ದಾಳಿ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಅಕ್ರಮವಾಗಿ ಹೆಂಡ (ಶೇಂದಿ) ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಡಿಎಸ್ಪಿ ಕಚೇರಿ ಜಾಗೃತದಳ ಹಾಗೂ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಅಕ್ರಮ ಹೆಂಡ ಹಾಗೂ ಆರೋಪಿತನನ್ನು ವಶಕ್ಕೆ ಪಡೆದ ಪ್ರಕರಣ ಕನಕಗಿರಿ ತಾಲೂಕಿನ ಹಿರೇಡಂಕನಕಲ್ ಗ್ರಾಮದಲ್ಲಿ ಸೋಮವಾರದಂದು ಮಧ್ಯಾನ್ಹ ಜರುಗಿದೆ.
ಹಿರೇ ಡಂಕನಕಲ್ ಗ್ರಾಮದ ಮುತ್ತಣ್ಣ ಮ್ಯಾಗಳಮಾನಿ (50) ಎನ್ನುವ ವ್ಯಕ್ತಿ ಕಳೆದ ಹಲವು ತಿಂಗಳುಗಳಿಂದ ಆಂಧ್ರಪ್ರದೇಶದಿಂದ ಅಕ್ರಮವಾಗಿ ಹೆಂಡವನ್ನು ತಂದು ಹಿರೇಡಂಕನಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕುರಿತು
ಡಿ. ವೈ. ಎಸ್. ಪಿ. ಜೆ.ಎಸ್. ನ್ಯಾಮಗೌಡ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಕಚೇರಿ ಜಾಗೃತ ದಳ ಹಾಗೂ ಗ್ರಾಮೀಣ ಸಿಪಿಐ ರಂಗಪ್ಪ ದೊಡ್ಮನಿ ಹಾಗೂ ಪೊಲೀಸರು ದಾಳಿ ನಡೆಸಿ
ಅಕ್ರಮ ನಡೆಸುತ್ತಿದ್ದ ಆರೋಪಿ ಹಾಗೂ 48 ಲೀಟರ್ ಹೆಂಡವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

