ಕಾರಟಗಿ ತಾಲೂಕು ಕಮ್ಮವಾರಿ ಸಂಘದ ಲೋಗೋ ಬಿಡುಗಡೆ:
*ಕಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಕಾರಟಗಿ ತಾಲೂಕು ಕಮ್ಮವಾರಿ ಸಂಘದ ರಚನೆ ಕಾರ್ಯಕ್ರಮ ಮರ್ಲಾನಹಳ್ಳಿಯ ರೆಡ್ಡಿ ವೀರಣ್ಣ ಸ್ಕೂಲಿನಲ್ಲಿ ಜರುಗಿತು ಸಂಘದ ಲೋಗೋವನ್ನು ಕಮ್ಮವಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕಮ್ಮವಾರಿ ಸಮಾಜದ
ದುರ್ಗಾರಾವ್,ನೆಕ್ಕಂಟಿ ನಾಗರಾಜ, ಬಿ.ಗೋಪಾಲರಾವ್,ರವಿಕಾಂತ,ಕಂಠಮಣಿ ಶ್ರೀನಿವಾಸ ಸೇರಿ ಅನೇಕರಿದ್ದರು.
ಪದಾಧಿಕಾರಿಗಳ ಆಯ್ಕೆ:ಕಾರಟಗಿ ತಾಲೂಕು ಕಮ್ಮವಾರಿ ಸಂಘವನ್ನು ನೂತನ ರಚನೆ ಮಾಡಲಾಗಿದ್ದು ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಲ್ಲಾ ನಲ್ಲ
ಗೋಪಾಲಕೃಷ್ಣ, ಕಾರ್ಯದರ್ಶಿ ಜಾಲಿಪರ್ತಿ ರಾಮಬಾಬು,ಖಜಾಂಚಿ ಗೋಡ್ತಿ ವೆಂಕಟೇಶರಾವ್ ಆಯ್ಕೆಯಾಗಿದ್ದು ಉಳಿದ ಪದಾಧಿಕಾರಿಗಳ ಆಯ್ಕೆ ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಕಾರ್ಯದರ್ಶಿ ಜಾಲಿಪರ್ತಿ ರಾಮಬಾಬು ತಿಳಿಸಿದ್ದಾರೆ.

