ಗಂಗಾವತಿ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಯಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ!

*ಪುಡಾರಿಗಳ ಅಡ್ಡ ಆಗಿರುವ ಕೇಂದ್ರ ಬಸ್ ನಿಲ್ದಾಣ.
*ನಿತ್ಯವೂ ಪ್ರಯಾಣಿಕರು,ವ್ಯಾಪಾರಿಗಳ ಮೇಲೆ ನಿಶಾಚರಿಗಳಿಂದ ಹಲ್ಲೆ, ದೌರ್ಜನ್ಯ.
*ಒಂದು ವರ್ಷದಿಂದ ಕೆಟ್ಟು ನಿಂತಿರುವ ಬಸ್ ನಿಲ್ದಾಣದ ಸಿಸಿ ಕ್ಯಾಮರಾಗಳು.
*ರಾತ್ರಿ ವೇಳೆ ನಗರದ ವಿವಿಧ ಸರ್ಕಲ್ ಗಳ ಪುಡಾರಿ ಯುವಕರಿಂದ ಗುಂಡು ಪಾರ್ಟಿ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ದುಷ್ಕರ್ಮಿಯೊರ್ವ ವಿನಾಕಾರಣ ವ್ಯಕ್ತಿಯೊಬ್ಬರ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ತಲೆ ಮತ್ತು ಎಡ ಭಾಗದ ಕಣ್ಣು, ಕಿವಿಗೆ ತೀವ್ರ ಗಾಯವಾದ ಪ್ರಕರಣ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಮಧ್ಯ ರಾತ್ರಿ ಜರುಗಿದೆ.
ಗಂಗಾವತಿ ಜೆಸ್ಕಾಂ ಕಚೇರಿಯ ನಿವೃತ್ತ ಲೈನ್ ಮ್ಯಾನ್ ಶಿವಪ್ಪ ಕೇಂದ್ರ ಬಸ್ ನಿಲ್ದಾಣದಲ್ಲಿ ಕುಳಿತಿರುವ ಸಂದರ್ಭದಲ್ಲಿ ದುಷ್ಕರ್ಮಿ ಒಬ್ಬ ಆಗಮಿಸಿ ವಿನಾಕಾರಣ ಜಗಳ ತೆಗೆದು ಕಲ್ಲಿನಿಂದ ತಲೆ ಮತ್ತು ಎಡ ಭಾಗದ ಕಣ್ಣು ಕಿವಿಗೆ ಹೊಡೆದಿದ್ದರಿಂದ ದೂರ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಪುಡಾರಿಗಳ ಅಟ್ಟಹಾಸ ಹೆಚ್ಚಾಗಿದ್ದು ನಿತ್ಯವೂ ಪ್ರಯಾಣಿಕರು ಮತ್ತು ಸಾರ್ವಜನಿಕರ ಮೇಲೆ ಮತ್ತು ವ್ಯಾಪಾರಿಗಳ ಮೇಲೆ ದೌರ್ಜನ್ಯ ಗುಂಡಾಗಿರಿ ವ್ಯಸಗುವ ಗುಂಪು ಕೆಲಸ ಮಾಡುತ್ತಿದೆ. ಜೊತೆಗೆ ನಗರದ ವಿವಿಧ ಸರ್ಕಲ್ ಗಳಲ್ಲಿ ಮಧ್ಯರಾತ್ರಿ ಪುಡಾರಿಗಳು ಮಧ್ಯಪಾನ ಸೇವನೆ ಮಾಡಿ ಪ್ರಯಾಣಿಕರು, ಸಾರ್ವಜನಿಕರು ಮತ್ತು ವಾಹನ ಸವಾರರ ಮೇಲೆ ಹೊಡಿಬಡಿ ಮಾಡುತ್ತಿದ್ದಾರೆ.
ಕೆಟ್ಟು ನಿಂತ ಸಿ.ಸಿ. ಕ್ಯಾಮರಾಗಳು: ಕೇಂದ್ರ ಬಸ್ ನಿಲ್ದಾಣಕ್ಕೆ ನಿತ್ಯವೂ ಸಾವಿರಾರು ಪ್ರಯಾಣಿಕರು ಸಾರ್ವಜನಿಕರು ಭೇಟಿ ನೀಡುತ್ತಾರೆ ಅಪರಾಧ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆ. ಎಸ್. ಆರ್. ಟಿ.ಸಿ ಕ್ಯಾಮರಗಳನ್ನು ಅಳವಡಿಸಿದ್ದು ಕಳೆದ ಒಂದು ವರ್ಷದಿಂದ ಸಿಸಿ ಕ್ಯಾಮರಗಳು ಕೆಟ್ಟು ನಿಂತಿವೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಿ.ಸಿ.ಕ್ಯಾಮೆರಾ ಗಳು ಇರುವ ಜಾಗದಲ್ಲಿ ವಿದ್ಯುತ್ ತೊಂದರೆ ಇದ್ದು ಕಳೆದ ಕೆಲವು ದಿನಗಳಿಂದ ಸಿ.ಸಿ. ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ.ದುರಸ್ತಿ ಮಾಡಿಸಲಾಗುತ್ತದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
ದುಷ್ಕರ್ಮಿ ಬಂಧನಕ್ಕೆ ಕ್ರಮ: ಕೇಂದ್ರ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ದುಷ್ಕರ್ಮಿಯ ಕುರಿತು ಪೊಲೀಸ್ ಇಲಾಖೆಯ ಶ್ರೀ ಕೃಷ್ಣದೇವರಾಯ ವೃತ್ತದ ಸಿ ಸಿ ಕ್ಯಾಮರಾದಲ್ಲಿ ವಿಡಿಯೋ ಸೆರೆಯಾಗಿದ್ದು ದುಷ್ಕರ್ಮಿಯನ್ನು ಶೀಘ್ರದಲ್ಲೇ ಬಂದಿಸಲಾಗುತ್ತದೆ ಎಂದು ನಗರ ಪೊಲೀಸ್ ಠಾಣೆಯ ಸಿ. ಪಿ. ಐ. ಪ್ರಕಾಶ ಮಾಳೆ ತಿಳಿಸಿದ್ದಾರೆ.


ಕಿಷ್ಕಿಂಧವಾಣಿ ಸುದ್ದಿ






ಕಿಷ್ಕಿಂಧವಾಣಿ ಸುದ್ದಿ
ಕಿಷ್ಕಿಂಧವಾಣಿ ಸುದ್ದಿ